Friday, December 19, 2008

ಕನಸು

ಪ್ರಪಾತದ ತುತ್ತುದಿಯಿಂದ

ಜಿಗಿವಾಗ

ಮದ್ಯೆ ಮರೆತೇಹೋಯಿತು

ಕಲಿತ ಈಜು










ಏಲಿಯೆಟ್ಟನ ಹಳದಿ ಬೆಳಕಿನ

ಸಂಜೆಯಲಿ ಕಫ್ಕಾನ ನಾಯಕರು

ಮುಗುಳ್ನಕ್ಕರು



ದುತ್ತನೆರಗಿದ ಕಾಡಿನಲಿ

ಗುತ್ತಿ ಸಿಗಲಿಲ್ಲ

ತಗಡು ಡಬ್ಬಿಯಲಿ

ಕೆಂಡದಹೊಗೆಯೊಂದಿಗೆ

ನಡೆವ ಹುಚ್ಚರು

ಜೊತೆಯಾದರು

ಹೊಸ ವರುಷ ೨೦೦೯


ಕಾಲ-ಯಮನ
ಗರಡಿಯಲಿ ಮತ್ತೊಂದು
ಬಲಿಯುತಿದೆ
ಹೊಸವರುಷ

Monday, December 1, 2008

ಧ್ವನಿ


ಹಾಡಲು ಕಲಿಸಿದ

ಹಕ್ಕಿಯೇ

ನನ್ನ ಧ್ವನಿಯನ್ನು ಹಿಂದಿರುಗಿಸು;

ನಾನು ನಾಳೆಗಳಿಗೆ

ನಡೆಯಬೇಕಿದೆ

ಭಯವಿಲ್ಲದೆ


ಸುಮ್ಮನೆ

ಅರಳಬೇಕು;

ಮುದುಡುವ,

ಬಾಡುವ,

ಉದುರುವ ಭಯವಿಲ್ಲದೆ

ಪದ್ಯ










ಚಿತ್ರದಲಿ




ಹಗಲಾಗಿಲ್ಲ




ಅದಕ್ಕೆ ಈ




ಪದ್ಯ ಮುಗಿದಿಲ್ಲ








ಇವೆಲ್ಲ ನನ್ನ ಸುತ್ತ ಕಟ್ಟಿದ




ಗೋಡೆಯ ಮೇಲೆ ಮೂಡಿದವು




ಹೊರ ಪರಿಸರದಿಂದ




ಅವಮಾನಿತವಾದವು

ಭಾವ-ಭಾಷೆ


ಭಾವ ಭಾಷೆಯಾಗುವುದು

ಭಾಷೆ ಭಾವವಾಗುವುದು

ಬೇರೆ-ಬೇರೆ ತಾನೆ?

Sunday, November 30, 2008

ನೋಟ

ನಿನ್ನ ಕಣ್ಣಿಗೆರಡು

ಗೆಜ್ಜೆ ತೊಡಿಸಿದ್ದೇನೆ



ನೀ ಕುಡಿನೋಟ

ಬೀರಿದಾಗೆಲ್ಲ ಅದು ನನ್ನೆದೆಯಲಿ

ಸದ್ದಾಗುತ್ತದೆ.

ಗೆಜ್ಜೆ

ನಿನ್ನ ಕಣ್ಣಿಗೆರಡು

ಗೆಜ್ಜೆ ತೊಡಿಸಿದ್ದೇನೆ



ನೀ ಕುಡಿನೋಟ

ಬೀರಿದಾಗೆಲ್ಲ ಅದು ನನ್ನೆದೆಯಲಿ

ಸದ್ದಾಗುತ್ತದೆ

Wednesday, November 26, 2008

ಮೌನ


ಚೆಲು ಮಾತು
ಮುಗಿದು ಮೌನದ
ದಂಡೆಯಲಿ ನಿಂತೆ

ನಿನ್ನ ಹೊರತಾದ
ಮೌನವೂ
ಇಷ್ಟವಾಗಲಿಲ್ಲ

ಯೌವ್ವನ


ಒಲವ ಮೊಗದಲಿ
ಮೂಗುತಿಯ ಮಿನುಗು
ಯುಗಾಂತರಗಳ ಭಾಷೆ

ನಾನು ನಿರಂತರ
ಯೌವ್ವನಿಗ

ಗೆಳತಿ


ಕೆಲವೊಮ್ಮೆ ಹೆಂಡತಿ
ಜೊತೆಗಿದ್ದೂ ಕಾಡುತ್ತವೆ
ಕೆಲವು ನೆನಪುಗಳು
ಗೆಳತಿಯಾಗಿ

ಬೆಳಕು


ಹಣತೆ ಮಾರುವ ಹೆಂಗಸು
ನಾಳೆಗೆ ಇರಲಾರಳು
ದುಡ್ಡಿದ್ದವರು
ಇಂದೇ ಕೊಂಡುಕೊಳ್ಳಬಹುದು
ಬೆಳಕು