skip to main |
skip to sidebar
ನಿನ್ನ ಕಣ್ಣಿಗೆರಡು ಗೆಜ್ಜೆ ತೊಡಿಸಿದ್ದೇನೆ ನೀ ಕುಡಿನೋಟ ಬೀರಿದಾಗೆಲ್ಲ ಅದು ನನ್ನೆದೆಯಲಿ
ಸದ್ದಾಗುತ್ತದೆ.
ನಿನ್ನ ಕಣ್ಣಿಗೆರಡು ಗೆಜ್ಜೆ ತೊಡಿಸಿದ್ದೇನೆ ನೀ ಕುಡಿನೋಟ ಬೀರಿದಾಗೆಲ್ಲ ಅದು ನನ್ನೆದೆಯಲಿ ಸದ್ದಾಗುತ್ತದೆ
ಚೆಲು ಮಾತು
ಮುಗಿದು ಮೌನದ
ದಂಡೆಯಲಿ ನಿಂತೆ
ನಿನ್ನ ಹೊರತಾದ
ಮೌನವೂ
ಇಷ್ಟವಾಗಲಿಲ್ಲ
ಒಲವ ಮೊಗದಲಿ
ಮೂಗುತಿಯ ಮಿನುಗು
ಯುಗಾಂತರಗಳ ಭಾಷೆ
ನಾನು ನಿರಂತರ
ಯೌವ್ವನಿಗ
ಕೆಲವೊಮ್ಮೆ ಹೆಂಡತಿ
ಜೊತೆಗಿದ್ದೂ ಕಾಡುತ್ತವೆ
ಕೆಲವು ನೆನಪುಗಳು
ಗೆಳತಿಯಾಗಿ
ಹಣತೆ ಮಾರುವ ಹೆಂಗಸು
ನಾಳೆಗೆ ಇರಲಾರಳು
ದುಡ್ಡಿದ್ದವರು
ಇಂದೇ ಕೊಂಡುಕೊಳ್ಳಬಹುದು
ಬೆಳಕು